Русские видео

Сейчас в тренде

Иностранные видео


Скачать с ютуб ಪವಮಾನ ಪವಮಾನ ಜಗದಾ ಪ್ರಾಣಾ|| PAVAMANA JAGADAPRANA WITH KANNADA LYRICS|| VISUALS TODAY || в хорошем качестве

ಪವಮಾನ ಪವಮಾನ ಜಗದಾ ಪ್ರಾಣಾ|| PAVAMANA JAGADAPRANA WITH KANNADA LYRICS|| VISUALS TODAY || 3 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಪವಮಾನ ಪವಮಾನ ಜಗದಾ ಪ್ರಾಣಾ|| PAVAMANA JAGADAPRANA WITH KANNADA LYRICS|| VISUALS TODAY ||

ಹರಿ ಸರ್ವೋತ್ತಮ ವಾಯು ಜೀವೋತ್ತಮ - ಇದು ಮಧ್ವ ಮತಾನುಯಾಯಿಗಳಿಗೆ ತರ್ಕ ಮಂತ್ರ. ಪ್ರಾಣದೇವರಿಗೆ ಸಮರ್ಪಿತ ಈ ಭಕ್ತಿ ಗೀತೆಯ ರಚನೆ ವಿಜಯದಾಸರದು. ಪವಮಾನ ಪವಮಾನ ಜಗದಾ ಪ್ರಾಣಾ / #Pavamana Pavamana #Jagadaprana Lyrics . . . . ಪವಮಾನ ಪವಮಾನ ಜಗದಾ ಪ್ರಾಣಾ ಸಂಕರುಷಣ ಭವಭಯಾರಣ್ಯ ದಹನ |ಪ| ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಗಳ ಪ್ರಿಯ ||ಅ ಪ|| ಹೇಮ ಕಚ್ಚುಟ ಉಪವೀತ ಧರಿಪ ಮಾರುತ ಕಾಮಾದಿ ವರ್ಗ ರಹಿತ ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ ರಾಮಚಂದ್ರನ ನಿಜದೂತ ಯಾಮ ಯಾಮಕೆ ನಿನ್ನಾರಾಧಿಪುದಕೆ ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ ಈ ಮನಸಿಗೆ ಸುಖಸ್ತೋಮವ ತೋರುತ ಪಾಮರ ಮತಿಯನು ನೀ ಮಾಣಿಪುದು |೧| ವಜ್ರ ಶರೀರ ಗಂಭೀರ ಮುಕುಟಧರ ದುರ್ಜನವನ ಕುಠಾರ ನಿರ್ಜರ ಮಣಿದಯಾ ಪಾರ ವಾರ ಉದಾರ ಸಜ್ಜನರಘವ ಪರಿಹಾರ ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು ಮೂರ್ಜಗವರಿವಂತೆ ಗರ್ಜನೆ ಮಾಡಿದಿ ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪಾದದ ಧೂಳಿ ಮಾರ್ಜನದಲಿ ಭವ ವರ್ಜಿತನೆನಿಸೊ |೨| ಪ್ರಾಣ ಅಪಾನ ವ್ಯಾನೋದಾನ ಸಮಾನ ಆನಂದ ಭಾರತಿ ರಮಣ ನೀನೆ ಶರ್ವಾದಿ ಗೀರ್ವಾಣಾದ್ಯಮರರಿಗೆ ಜ್ಞಾನಧನ ಪಾಲಿಪ ವರೇಣ್ಯ ನಾನು ನಿರುತದಲಿ ಏನೇನೆಸಗಿದೆ ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ ಪ್ರಾಣನಾಥ ಸಿರಿವಿಜಯವಿಠಲನ ಕಾಣಿಸಿ ಕೊಡುವದು ಭಾನು ಪ್ರಕಾಶ |೩|

Comments