Русские видео

Сейчас в тренде

Иностранные видео


Скачать с ютуб Ava Kulavo Ranga | ಆವ ಕುಲವೋ ರಂಗಾ | Dasarapada | Srinivas в хорошем качестве

Ava Kulavo Ranga | ಆವ ಕುಲವೋ ರಂಗಾ | Dasarapada | Srinivas 3 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Ava Kulavo Ranga | ಆವ ಕುಲವೋ ರಂಗಾ | Dasarapada | Srinivas

ಹಾಡುವ ಸಣ್ಣ ಪ್ರಯತ್ನ-ಶ್ರೀನಿವಾಸ್ ರಚನೆ- ಶ್ರೀ ವಾಧಿರಾಜರು ಸಂಯೋಜನೆ-ತಿರುಮಲೆ ಶ್ರೀನಿವಾಸ್ ಸಂಗೀತ-ಭಾರದ್ವಾಜ್ ಟಿ. ಟಿ ಡಿ. ಮೂಲಗಾಯಕರು- ಅನಂತ್ ರಾಜ್ ಮಿಸ್ತ್ರಿ ಆವ ಕುಲವೋ ರಂಗಾ ಅರಿಯಲಾಗದು || ಆವ ಕುಲವೆಂದರಿಯಲಾಗದು ಗೋವ ಕಾಯ್ವ ಗೊಲ್ಲನಂತೆ ದೇವಲೋಕದ ಪಾರಿಜಾತವು ಹೂವ ಸತಿಗೆ ತಂದನಂತೆ|| ಗೋಕುಲದಲ್ಲಿ ಹುಟ್ಟಿದನಂತೆ ಗೋವುಗಳನ್ನು ಕಾಯ್ದನಂತೆ || ಕೊಳಲನೂದಿ ಮೃಗಪಕ್ಷಿಗಳ ಮರಳು ಮಾಡಿದನಂತೆ ತರಳತನದಿ ವರಳ ನೆಗಹಿ ಮರವ ಮುರಿದು ಮತ್ತೆ ಹಾರಿ ತೆರೆದು ಬಾಯಿ‌ಯೊಳಗಿರೇಳು ಲೋಕವ ಇರಿಸಿ ತಾಯಿಗೆ ತೋರ್ದನಂತೆ || ಗೊಲ್ಲತಿಯರ ಮನೆಗೆ ಪೊಕ್ಕು ಕಳ್ಳತನವ ಮಾಡಿದನಂತೆ || ಒಲ್ಲದ ಪೂತನಿಯ ವಿಷವನುಂಡು ಮೆಲ್ಲನೆ ತೃಣನ ಕೊಂದನಂತೆ ಪಕ್ಷಿ ತನ್ನ ವಾಹನವಂತೆ ಹಾವು ತನ್ನ ಹಾಸಿಗೆಯಂತೆ ಮುಕ್ಕಣ್ಣ ತನ್ನ ಮೊಮ್ಮಗನಂತೆ ಮುದ್ದುಮುಖದ ಚೆಲ್ವನಂತೆ || ಕರಡಿ ಮಗಳ ತಂದನಂತೆ ಶರಧಿ ಮಗಳು ಮಡದಿಯಂತೆ || ಧರಣಿಯನ್ನು ಬೇಡಿದನಂತೆ ಈರೇಳು ಲೋಕದ ಒಡೆಯನಂತೆ ಹಡಗಿನಿಂದಲಿ ಬಂದನಂತೆ ಕಡಲದಡೆಯಲಿ ನಿಂದನಂತೆ ಒಡನೆ ಮಧ್ವರಿಗೊಲಿದನಂತೆ ಒಡೆಯ ಹಯವದನನಂತೆ ಆವ ಕುಲವೋ ರಂಗಾ ಅರಿಯಲಾಗದು || ಆವ ಕುಲವೆಂದರಿಯಲಾಗದು ಗೋವ ಕಾಯ್ವ ಗೊಲ್ಲನಂತೆ ದೇವಲೋಕದ ಪಾರಿಜಾತವು ಹೂವ ಸತಿಗೆ ತಂದನಂತೆ||

Comments